Sitaram Jindal Scholarship 2026|



ಕರ್ನಾಟಕ ಅಥವಾ ಭಾರತದಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ 11ನೇ ತರಗತಿಯಿಂದ ಇಂಜಿನಿಯರಿಂಗ್ (Engineering), ಮೆಡಿಕಲ್ (Medical),ITI ಮತ್ತು ಡಿಪ್ಲೋಮಾ (Diploma) ವಿದ್ಯಾರ್ಥಿಗಳಿಗೆ ಸೀತಾರಾಮ ಜಿಂದಾಲ್ ಫೌಂಡೇಷನ್ ವತಿಯಿಂದ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ತಿಂಗಳಿಗೆ ₹500/- ರಿಂದ ₹3200/- ರು ಗಳ ವರೆಗೂ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಆಸಕ್ತಿಯುಳ್ಳ ಅರ್ಹ ವಿದ್ಯಾರ್ಥಿಗಳು ಕೆಳಗೆ ನೀಡಲಾದ ವಿವರಗಳನ್ನು ಸರಿಯಾಗಿ ಗಮನಿಸಿ ಮತ್ತು ಅರ್ಜಿ ಸಲ್ಲಿಸಿ. ಇದು ಪ್ರೈವೇಟ್ (Private) ಕಂಪನಿ (Company) ಆಗಿರುವುದರಿಂದ ಸೀತಾರಾಮ ಜಿಂದಾಲ್ ಫೌಂಡೇಷನ್ ವತಿಯಿಂದ CSR(Corporate Social Responsibility) ಅಡಿಯಲ್ಲಿ ಇಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮತ್ತು ತಮ್ಮ ಕಾಲೇಜ್ ಫೀಸ್ ಕಟ್ಟಲು ಆಗದ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ವಿದ್ಯಾರ್ಥಿವೇತನವನ್ನು ನೀಡುತ್ತಿದರೆ.


ಅರ್ಹತೆಗಳು(Eligibility):

ಸೀತಾರಾಮ ಜಿಂದಾಲ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು:

• ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು 30 ವರ್ಷದ ಒಳಗಿನವರಾಗಿರಬೇಕು.

• 11, 12, ITI, Diploma, UG, PG, Medical and Engineering ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ.

• ಸಂಬಳ ಪಡೆಯುವ ಕುಟುಂಬದ ವಾರ್ಷಿಕ ಆದಾಯವು ₹4,00,000 ಮತ್ತು ಪಡೆಯದ ಕುಟುಂಬದ ಆದಾಯವು ₹2,50,000 ಇರಬೇಕು.

• ಕಡೆವರ್ಷದ(Last year) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅನರ್ಹರು.


ವಿದ್ಯಾರ್ಥಿವೇತನದ ಮೊತ್ತ(Scholarship Amount):

• ತರಗತಿ 11 ಮತ್ತು 12 ನೇ ವಿದ್ಯಾರ್ಥಿಗತಿಗಳಿಗೆ ಹುಡುಗಿಯರಿಗೆ : ₹700/- 

ಹುಡುಗರಿಗೆ : ₹500/- 

• ITI, Diploma ವಿದ್ಯಾರ್ಥಿಗಳಿಗೆ 

Govt ITIs: ₹500/-

Prvt ITIs: ₹700/-

• UG,PG ವಿದ್ಯಾರ್ಥಿಗಳಿಗೆ 

ಹುಡುಗಿಯರಿಗೆ: ₹1400/- 

ಹುಡುಗರಿಗೆ: ₹1100/-


ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ(How to Apply):


ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ

1.ಹಂತ : ಸೀತಾರಾಮ್ ಜಿಂದಾಲ್ ಫೌಂಡೇಶನ್‌ನ ಅಧಿಕೃತ ವೆಬ್‌ಸೈಟ್ ಗೆ ಬೆಟಿನೀಡಿ. Click here to Apply

2. ಹಂತ : “Apply Scholarship” ಆಯ್ಕೆಯನ್ನು ಆರಿಸಿ.

3.ಹಂತ : ವಿದ್ಯಾರ್ಥಿಯ ಹೆಸರು, ಜನ್ಮ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಮುಂತಾದ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.

4.ಹಂತ : ಕಾಲೇಜು, ಪ್ರಸ್ತುತ ಕೋರ್ಸ್, ಹಿಂದಿನ ಪರೀಕ್ಷೆಯ ಅಂಕಗಳು, ವಾರ್ಷಿಕ ಶುಲ್ಕ ಮತ್ತು ಪೋಷಕರ ಆದಾಯದ ವಿವರಗಳನ್ನು ನಮೂದಿಸಿ.

5.ಹಂತ : ಬ್ಯಾಂಕ್ ವಿವರಗಳು ಮತ್ತು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.

6.ಹಂತ : ಅರ್ಜಿ ಸಲ್ಲಿಸುವ ಮೊದಲು ಎಲ್ಲ ವಿವರಗಳನ್ನು ಪರಿಶೀಲಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ.

7.ಹಂತ : ಅರ್ಜಿ ಸ್ವೀಕೃತವಾದ ನಂತರ ಪೋರ್ಟಲ್‌ನಲ್ಲಿ ಸೂಚಿಸಿರುವಂತೆ ದಾಖಲೆಗಳನ್ನು ಅಪ್‌ಲೋಡ್ ಮಾಡಿ, (ನಿಮ್ಮ ಕಾಲೇಜ್ ನ ಸಹಿ ಮತ್ತು ಮುದ್ರೆ ಇರುವ ಅರ್ಜಿಯನ್ನು ಸಲ್ಲಿಸಿ.

8.ಹಂತ : ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿ. ಹೆಚ್ಚುವರಿ ದಾಖಲೆಗಳು ಅಥವಾ ಮೂಲ ದಾಖಲೆಗಳ ಪ್ರತಿಗಳನ್ನು ಕಳುಹಿಸಲು ಸೂಚಿಸಿದರೆ, ಅಧಿಕೃತ ಸೂಚನೆಗಳಂತೆ ಕ್ರಮ ಕೈಗೊಳ್ಳಿ.

ಸಂಪೂರ್ಣ ಅರ್ಜಿ ಸಲ್ಲಿಸಿದ ನಂತರ ನೀವು ಕೆಲವು ಕಾಲ ಫೌಂಡೇಷನ್ ವತಿಯಿಂದ ನಿಮಗೆ ಮೆಸೇಜ್ ಬರುವವರೆಗೂ ಕಾಯಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ದಾಖಲೆಗಳ ಪರಿಶೀಲನೆ ಮತ್ತು ಫೌಂಡೇಶನ್‌ನ ಅನುಮೋದನೆ ಅಗತ್ಯವಿರುತ್ತದೆ. ನಂತರ ನೀವು ನಿಮ್ಮ ವಿದ್ಯಾರ್ಥಿವೇತನವನ್ನು ತಿಂಗಳಿಗೊಮ್ಮೆ ಪಡೆಯಬಹುದು.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು